ಫಾರ್ ರಿಜಿಸ್ಟ್ರೇಶನ್ ಸಂಬಂಧಗಳ ಗಟ್ಟಿತನ -- ರೇಟಿಂಗ್ : 3/5 ***
Posted date: 24 Sat, Feb 2024 09:47:42 AM
ಪತಿ, ಪತ್ನಿ ನಡುವಿನ ಸಂಬಂಧ ಗಟ್ಟಿಯಾಗಿರಬೇಕು ಎಂದರೆ ಇಬ್ಬರಲ್ಲೂ ಪರಸ್ಪರ ನಂಬಿಕೆಯಿರಬೇಕು, ಆ ಸಂಬಂಧ ರಿಜಿಸ್ಟರ್ ಆಗಿರಬೇಕು ಎಂಬುದನ್ನು ಯುವ ದಂಪತಿಗಳ ಕಥೆಯ ಮೂಲಕ ನಿರ್ದೇಶಕ  ನವೀನ್ ದ್ವಾರಕನಾಥ್ ಫಾರ್ ರಿಜಿಸ್ಟ್ರೇಷನ್ ಚಿತ್ರದಲ್ಲಿ 
ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ,  ಮಾರ್ಕೆಂಟಿಂಗ್ ಮ್ಯಾನೇಜರ್ ಅಕ್ಷಯ್(ಪೃಥ್ವಿ) ಮತ್ತು ಅನ್ವಿತಾ(ಮಿಲನಾ ನಾಗರಾಜ್) ಈ ಕಥೆಯ ಮುಖ್ಯ ಪಾತ್ರಧಾರಿಗಳು. ಮನೆಯಲ್ಲಿ ಹೇಳದೇ, ಇವರಿಬ್ಬರೂ ಗುಟ್ಟಾಗಿ ಮದುವೆಯಾದ ಮೇಲೆ, ಇವರಚ ಮದುವೆ ವಿಷಯ  ಕುಟುಂಬದವರಿಗೆ ತಿಳಿಯುತ್ತದೆ. ನಂತರ ಕುಟುಂಬದವರೆಲ್ಲ ಸೇರಿ ಇವರಿಬ್ಬರಿಗೂ ಮತ್ತೊಮ್ಮೆ ಶಾಸೋಕ್ತವಾಗಿ ಮದುವೆ ಮಾಡಿಸುತ್ತಾರೆ,  ನಂತರದ ಬೆಳವಣಿಗೆಯಲ್ಲಿ  ಇಬ್ಬರ ಜೀವನದಲ್ಲೂ  ದೊಡ್ಡ ಬಿರುಗಾಳಿ ಬೀಸುತ್ತದೆ, ಅಕ್ಷಯ್ ಮನೆಯಲ್ಲಿ  ಅನುಮಾನಾಸ್ಪದವಾಗುವ ಹಾಗೆ ನಡೆದುಕೊಳ್ಳುತ್ತಾನೆ, ಒಂದು ಕಾಲ್ ಬಂದಕೂಡಲೆ ಇದ್ದಕ್ಕಿದ್ದ ಹಾಗೆ ಹೋಗುವ ಈತನ ನಡವಳಿಕೆ ಪತ್ನಿಗೆ ಸಹಿಸದಾಗುತ್ತದೆ.  ಪತಿಯ ವಿಚಿತ್ರ ನಡವಳಿಕೆಗಳಿಂದ ಬೇಸರಗೊಂಡ ಅನ್ವಿತಾ ಬೇಸರಗೊಂಡು ತವರುಮನೆಗೆ ಹೋಗುತ್ತಾಳೆ. 
 
ಒಂದು ಹಂತದಲ್ಲಿ ಅನ್ವಿತಾ  ಡೈವರ್ಸ ತೆಗೆದುಕೊಳ್ಳುವ ಹಂತಕ್ಕೂ  ಬಂದು ಬಿಡುತ್ತಾಳೆ. ಆನಂತರ ಏನಾಗುತ್ತದೆ, ಇಬ್ಬರೂ ಮತ್ತೆ ಒಂದಾದರಾ, ಬೇರಯಾದರಾ  ಎನ್ನುವುದೇ ಫಾರ್ ರಿಜಿಸ್ಟ್ರೇಷನ್  ಚಿತ್ರದ ಕ್ಲೈಮ್ಯಾಕ್ಸ್.  ಆರಂಭದಲ್ಲಿ ಸರಳವಾಗಿ ಸಾಗುವ ಕಥೆ ದ್ವಿತಿಯಾರ್ಧದಲ್ಲಿ  ಬರುವ ತಿರುವುಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ  ಸಫಲವಾಗಿವೆ.   ಲವ್‌ಸ್ಟೋರಿ ಮೂಲಕ ಆರಂಭವಾದ ಈಚಿತ್ರ ಇಂಟರ್‌ವೆಲ್ ನಂತರ  ಫ್ಯಾಮಿಲಿ ಸ್ಟೋರಿಯಾಗಿ ಬದಲಾಗುತ್ತದೆ.   ಈ ಚಿತ್ರದ ಮೂಲಕ ನಿರ್ದೇಶಕ ನವೀನ್ ದ್ವಾರಕನಾಥ್ ಒಂದು ವಿಶೇಷ  ಪ್ರಯತ್ನ ಮಾಡಿದ್ದಾರೆ.
 
ಫ್ಯಾಮಿಲಿ ಆಡಿಯನ್ಸ್ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಥೆ ಮಾಡಿದ್ದಾರೆ.  ಚಿತ್ರದಲ್ಲಿ ಸಂಬಧಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ.‌
 
ಗಂಡ-ಹೆಂಡತಿ ಇಬ್ಬರ ನಡುವೆಯೂ ನಂಬಿಕೆ ಎನ್ನುವುದು ಎಷ್ಟು ಮುಖ್ಯ, ಸಂಸಾರದಲ್ಲಿ ಮೂರನೇ ವ್ಯಕ್ತಿ ತಲೆಹಾಕಿದರೆ ಏನಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಅಭಿಲಾಷ್ ಮತ್ತು ಅಭಿಷೇಕ್ ಅವರ ಛಾಯಾಗ್ರಹಣ ಚೆನ್ನಾಗಿದೆ. ಆಗಾಗ ಬರುವ ಹಾಡುಗಳು ಮನಸಿಗೆ  ಮುದ ನೀಡುತ್ತವೆ.  ನಿರ್ದೇಶಕರ ಜೊತೆ ತಬಲಾನಾಣಿ ಬರೆದಿರುವ ಸಂಭಾಷಣೆಗಳು ಚುರುಕಾಗಿವೆ.
 
 ಪೃಥ್ವಿ ಅಂಬಾರ್ ಮತ್ತು ಮಿಲನಾ ನಾಗರಾಜ್ ಜೋಡಿ ತೆರೆಮೇಲೆ ಮುದ್ದಾಗಿ ಕಾಣಿಸುತ್ತದೆ. ಇಬ್ಬರೂ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಬಲಾನಾಣಿ ತಮ್ಮ ಪಂಚಿಂಗ್ ಡೈಲಾಗ್ ಗಳ  ಮೂಲಕವೇ  ನಗಿಸುತ್ತಾರೆ. ಕಂಪನಿ ಮಾಲೀಕನಾಗಿ  ರಮೇಶ್ ಭಟ್, ಪೋಷಕರಾಗಿ ಬಾಬು ಹಿರಣ್ಯಯ್ಯ, ಸುಧಾ ಬೆಳವಾಡಿ ತಮ್ಮ  ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಲಾಯರ್ ಪಾತ್ರದಲ್ಲಿ ರವಿಶಂಕರ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಗೆ ಇದು ಹೇಳಿ ಮಾಡಿಸಿದ ಚಿತ್ರ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed